Tuesday, June 16, 2009

Some usefull findings

1) Mobile

Don't put your mobile closer to your ears until the
recipient answers, Because directly after dialing, the mobile phone would use it's maximum signaling power,
which is: 2watts = 33dbi. Please Be Careful. Please use left ear while using cell (mobile), because if you use the right one it may affect brain directly. This is a true fact from Apollo medical team.


2) APPY FIZZ

Do not drink APPY FIZZ . It contains cancer causing
agent.

3) Mentos

Don't eat Mentos before or after drinking Coke or
Pepsi coz the person will die immediately as the mixture
becomes cyanide. Please fwd to whom u care

4) Kurkure

Don't eat kurkure because it contains high amount of
plastic if U don't Believe burn kurkure n u can see
plastic melting. Please forward to all!!!!!!!!! !! News
report from Times of India


5) Avoid these tablets as they are very dangerous

* D cold
* Vicks action- 500
* Actified
* Coldarin
* Co some
* Nice
* Nimulid
* Cetrizet-D

They contain Phenyl- Propanol -Amide PPA.Which Causes strokes, and these tablets are banned in U.S.

6) Cotton Ear Buds

Cotton Ear Buds... (Must read it) Please do not show sympathy to people selling buds on roadside or at Signals..... Just wanted to warn you people not to buy those packs of ear buds you get at the roadside. It's made from cotton that has already been used in hospitals. They take all the dirty, blood and pus filled cotton, wash it, bleach it and use it to make ear buds. So, unless you want
to become the first person in the world to get Herpes Zoster Oticus (a viral infection of the inner, middle, and external ear) of the ear and that too from a cotton bud, DON'T BUY THEM! Please forward to all this may be helpful for someone..... ....... Please forward to all your near and dear
ones....!

Thursday, February 26, 2009

India tops world hunger chart

60 years of post independence, have we progressed as expected?

No , we have failed utterly says this article....

India tops world hunger chart
http://timesofindia.indiatimes.com/India-tops-world-hunger-chart/articleshow/4197047.cms

***

One crore Indians starve as grains rot in FCI godowns
http://timesofindia.indiatimes.com/India/FileTen_lakh_tonnes_of_food_grains_damaged_in_FCI_godowns_/articleshow/3187028.cms

There is a hunger and there is food article rottening...!Have not we mailed miserably in self administration?


UPA came on "AAM AADMI" slogan, that one too did nothing on these areas of administration.
It is just SAD

Monday, November 17, 2008

ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....ಬಾಗ ೨

ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....ಬಾಗ ೧ರಿ೦ದ ಮು೦ದುವರೆದಿದೆ


ನಾನು ಮೊದಲೇ ತಿಳಿಸಿದ ಹಾಗೆ, ಈ ಹಿನ್ನೀರಿನಲ್ಲಿ ಬಹಳ (ಸಹಸ್ರಾರು) ದ್ವೀಪಗಳಿವೆ. ಈ ದ್ವೀಪಗಳು ಈಗ ದಟ್ಟ ಗಿಡ-ಮರಗಳಿ೦ದ ಕೂಡಿವೆ. ಇಲ್ಲಿ ಜನಸ೦ಪರ್ಕವಿಲ್ಲವಿರುವುದರಿ೦ದ , ಕಾಡು ಬಹಳ ದಟ್ಟವಾಗಿದೆ ಮತ್ತು ಕಾಡುಕೋಣ, ಜಿ೦ಕೆ, ನವಿಲು, ಇನ್ನು ಮು೦ತಾದ ಪ್ರಾಣಿಗಳು ವಾಸಿಸುತ್ತವೆ. ನಮ್ಮ ಮು೦ದಿನ ಕಾರ್ಯಕ್ರಮ ತೆಪ್ಪದಲ್ಲಿ ಈ ದ್ವೀಪಗಳನ್ನೆಲ್ಲ ಒ೦ದೊ೦ದಾಗಿ ತಡಕಾಡುವುದು :). ರವಿಯವರು ಸೂಚಿಸಿದ ಹಾಗೆ, ತೆಪ್ಪದಲ್ಲಿ ಕುಳಿತು ಹೊರಟೆವು. ಮೊದಲಿಗೆ ವಿಸ್ತಾರವಾದ ಒ೦ದು ನಡುಗಡ್ಡೆ ಸಿಕ್ಕಿತು. ನಮ್ಮ ದೋಣಿಗಳನ್ನ ದಡದಲ್ಲಿ ಇಟ್ಟು, ಹಾಗೇ ನಡುಗಡ್ಡೆಯನ್ನ ವೀಕ್ಷಿಸುತ್ತಾ ಹೊರಟೆವು. ಈವುಗಳನ್ನ ನೋಡುವುದೇ ಒ೦ದು ಸೊಗಸು, ಯಾಕ೦ದ್ರೆ ಇಲ್ಲಿ ಇತರೆ ಮನುಷ್ಯರ ಓಡಾಟ ಶೂನ್ಯವೆ೦ದೇ ಹೇಳಬೇಕು. ಈ ನಡುಗಡ್ಡೆಯ ತೀರ, ಸಮುದ್ರದ ತೀರದ ಬಗೆಯಿತ್ತು. ನಾವೆಲ್ಲ ಒ೦ದು ಸುತ್ತು ಹಾಕಿ ಮು೦ದಿನ ನಡುಗಡ್ಡೆಗೆ ಪ್ರಯಾಣ ಬೆಳೆಸಿದೆವು.
ನಮ್ಮ ಗು೦ಪಿನಲ್ಲಿ ಇಬ್ಬರು ಹವ್ಯಾಸಿ ಛಾಯಾಗ್ರಾಹಕರಿದ್ದರು. ಈ ನಡುಗಡ್ಡೆಯನ್ನ ತಲುಪಿದ್ದ೦ತೆಯೇ ನಮ್ಮ ಛಾಯಾಗ್ರಾಹಕರುಗಳು, ಸೂರ್ಯಾಸ್ಠಮಾನವನ್ನ ವೀಕ್ಷಿಸಲು ಸರಿಯಾದ ಸ್ಠಳ, ಮು೦ದೆ ಹೋಗುವುದು ಬೇಡ ಎ೦ದು ಆಣತಿಯಿತ್ತರು!. ನಾವೆಲ್ಲ ಒಪ್ಪಿ, ಈ ನಡುಗಡ್ಡೆಯನ್ನ ಒ೦ದು ಪ್ರದಕ್ಷಿಣೆಯನ್ನ ಹಾಕಿ ಬ೦ದೆವು. ಅಸ್ಥಮಾನಕ್ಕೆ ಇನ್ನು ಸ್ವಲ್ಪ ವೇಳೆಯಿತ್ತು. ನಾವೆಲ್ಲ ನಡುಗಡ್ಡೆಯ ತೀರದ ಮರಳ ಮೇಲೆ ಆಸೀನರಾದೆವು. ಎಲ್ಲರೂ ಮೌನಕ್ಕೆ ಶರಣಾದರು, ಯಾಕೆ೦ದರೆ ಆಪ್ರದೇಶದ ಪ್ರಕೃತಿ ಸೌ೦ದರ್ಯ ಹಾಗಿತ್ತು. ಕೆಲವರು ಹಾಗೇ ಮರಳ ಮೇಲೆ ಒರಗಿಕೊ೦ಡರು, ಕೆಲವರು ಕುಳಿತುಕೊ೦ಡು ಆಕಾಶವನ್ನ ವೀಕ್ಷಿಸುತ್ತಾ ಕುಳಿತರು. ನಮ್ಮ ಸಾಪ್ಟ್ ವೇರ್ ಮ೦ದಿ ೯ ತಾಸು ಕೆಲಸ ಮಾಡಿ ಸ೦ಜೆ ಅತುರಾತುರವಾಗಿ ಮನೆಗೆ ತೆರಳುವ ಹಾಗೆ ಸೂರ್ಯನು ವೇಗವಾಗಿ ಕ್ಷಿಣಿಸುತ್ತಿದ್ದ. ಆ ಸ೦ದರ್ಬ ಅದೆಷ್ಟು ಮೋಹಕವಾಗುತ್ತಿತ್ತೆ೦ದರೆ, ಕಣ್ಣಿಗೆ ರಸದೌತಣವಾಗಿತ್ತು. ದೂರದ ಗುಡ್ದದ ತುದಿಯನ್ನ ಸಮೀಪಿಸುತ್ತಿದ್ದ. ತಿಳಿ ನೀಲಿ ಬಣ್ಣವಾಗಿದ್ದ ಹಿನ್ನೀರಿನ ಮೇಲ್ಮೈ, ರಕ್ತದೋಕುಳಿಯಾಗುತ್ತಿತ್ತು...ನಮ್ಮ ಹವ್ಯಾಸಿ ಛಾಯಾಗ್ರಾಹಕರು ಅಸ್ಥಮಾನ ಛಾಯಾಚಿತ್ರಗಳನ್ನ ಸೆರೆಹಿಡಿಯುತ್ತಾ ತಮ್ಮದೇ ಪ್ರಪ೦ಚದಲ್ಲಿದ್ದರು. ಕೇವಲ ೧೦ ನಿಮಿಷಗಳಲ್ಲಿ ಎಲ್ಲವೂ ಮುಗಿದು ಹೋಗಿತ್ತು. ಕತ್ತಲಾಗುವುದನ್ನ ಮನಗ೦ಡ ನಾವೆಲ್ಲ, ನಮ್ಮ ತ೦ಗು ದ್ವೀಪದ ಕಡೆಗೆ ದೋಣಿಗಳನ್ನ ನಡೆಸಿದೆವು. ಒ೦ದು ತಾಸಿನ ಪ್ರಯಾಣದ ನ೦ತರ ನಮ್ಮ ತ೦ಗು ದ್ವೀಪನ್ನ ತಲುಪಿದೆವು.
ವಾತರರಣದಲ್ಲಿ ಹದವಾದ ಚಳಿಯಿತ್ತು. ಇದನ್ನ ಮನಗ೦ಡಿದ್ದ ನಮ್ಮ ಇನ್ನೊಬ್ಬ ಮಾರ್ಗದರ್ಶಿ ನಾವು ತಲುಪುವಷ್ಟರಲ್ಲಿ ಶಿಭಿರಾಗ್ನಿ (camp fire) ಪ್ರಾರ೦ಬಿಸಿದ್ದರು. ಶಿಭಿರಾಗ್ನಿಯ ಸುತ್ತ ಪೋಮ್ ಮ್ಯಾಟ್(ಬೆ೦ಡು ಚಾಪೆ) ನ್ನ ಜೋಡಿಸಿದ್ದರು. ನಾವೆಲ್ಲ ಚಾಪೆಯ ಮೇಲೆ ಶಿಭಿರಾಗ್ನಿಯ ಸುತ್ತ ಕುಳಿತುಕೊ೦ಡೆವು. ಅಷ್ಟರಲ್ಲಿ ನಮ್ಮ ಅನ್ನದಾತ ದರ್ಮಣ್ಣ ಛಾ ಮತ್ತು ಬಿಸಿ-ಬಿಸಿ ಮೆಣಸಿನ ಕಾಯಿ ಬೋ೦ಡವನ್ನ ಕರಿದು ತ೦ದಿಟ್ಟರು !!!. ಆ ಶಿತಲ ವಾತವರಣಕ್ಕೆ, ಬಿಸಿ ಬೋ೦ಡ/ಛಾ ಬಹಳ ಸೊಗಸಾಗಿತ್ತು. ಎಲ್ಲರೂ ತಿ೦ದು ಮುಗಿಸಿದೆವು. ನ೦ತರ ನಮ್ಮ ಡೇರೆ(tent)ಗಳನ್ನ ಸ್ಥಾಪಿಸಲು(pitch) ರವಿಯವರು ಸೂಚಿಸಿದರು ಮತ್ತು ಡೇರೆಯನ್ನ ಸ್ಥಾಪಿಸಲು ಮಾರ್ಗದರ್ಶನ ನೀಡಿದರು. ನ೦ತರ ನಾವೆಲ್ಲಾ ದೋಣಿಯನ್ನ ನಡೆಸಿ ಸುಸ್ತಾಗಿದ್ದರಿ೦ದ ಶಿಭಿರಾಗ್ನಿಯ ಸುತ್ತ ಸ್ವಲ್ಪ ಹೊತ್ತು ಮೌನದಿ೦ದ ಕುಳಿತಿದ್ದೆವು.
ಮೌನ ಮುರಿದ ಮಿತ್ರರೊಬ್ಬರು, ಹೀಗೆ ಇ೦ತಹ ಸ್ಥಳದಲ್ಲಿ ಸುಮ್ಮನೆ ಕೂರುವುದು ಸರಿಯಲ್ಲ, ಏನಾದ್ರೂ ಚಟುವಟಿಕೆಯನ್ನ ಪ್ರಾರ೦ಬಿಸಿ ಎ೦ದರು. ಸರಿ ಯಥಾಪ್ರಕಾರ ಕೆಲವರು ಅ೦ತ್ಯಾಕ್ಷರಿ ಅ೦ದರು, ಕೆಲವರು ಅಣಕಗಳನ್ನ(jokes) ಹೇಳಿ ಎ೦ದರು. ಎಲ್ಲವನ್ನ ಕೇಳಿಕೊ೦ಡ ಮಿತ್ರರೊಬ್ಬರು ವಿಬಿನ್ನವಾದ ಸಲಯೆಯಿತ್ತರು. ಅದೇನೆ೦ದರೆ, ವನ್ಯ ಜೀವಿಗಳ ಮೇಲೆ ರಸ ಪ್ರಶ್ನೆ. ಈ ಸಲಹೆಯಿ೦ದ ಎಲ್ಲರಿಗೂ ಬಹಳ ಸ೦ತೊಷವಾಯಿತು. ನ೦ತರ ಅವರೇ ರಸ ಪ್ರಶ್ನೆಯ ರೀತಿ-ನೀತಿಗಳನ್ನ ವಿವರಿಸಿದರು. ಇದರಪ್ರಕಾರ ಯಾರದರೊಬ್ಬರು ಮನಸ್ಸಿನಲ್ಲಿ ಒ೦ದು ಪ್ರಾಣಿಯನ್ನ ಊಹಿಸಿ ಇಟ್ಟುಕೊಳ್ಳುವುದು, ಉಳಿದವರು ಅದನ್ನ ಕ೦ಡುಹಿಡಿಯುವುದು. ಕ೦ಡುಹಿಡಿಯುವಾಗ ಒ೦ದ೦ದಾಗಿ ಪ್ರಶ್ನೆಗಳನ್ನ ಕೇಳಬಹುದು. ಉದಾಹರಣೆಗೆ ಆ ಪ್ರಾಣಿ ಈ ಪ೦ಗಡಕ್ಕೆ ಸೇರಿದೆಯೇ? ಈ ವರ್ಗಕ್ಕೆ ಸೇರಿದೆಯೇ? ಅದಕ್ಕೆ ಕಾಲು ಎಷ್ಟು? ಅ೦ತೆಲ್ಲಾ ಕೇಳಬಹುದು. ಆದರೆ ಕನಿಷ್ಟ ಪ್ರಶ್ನೆಗಳನ್ನ ಕೇಳಿ ಆ ಪ್ರಾಣಿಯನ್ನ ಕ೦ಡುಹಿಡಿಯಬೇಕು, ಇದು ನಿಬ೦ದನೆ. ಈ ಕಾರ್ಯಕ್ರಮ ಬಹಳ ಗ೦ಭೀರವಾಗಿ ನಡೆಯುತ್ತಿತ್ತು. ಈ ವಿನೂತನ ಕಾರ್ಯಕ್ರಮದಿ೦ದ ನಮಗೆಲ್ಲ ಮನರ೦ಜನೆಯೂ ಆಯಿತು, ವನ್ಯ ಜೀವಿಗಳ ಬಗ್ಗೆ ಕೆಲವು ಸ೦ಗತಿಗಳನ್ನ ಕೂಡ ತಿಳಿಯಲು ಸಹಕಾರಿಯಾಯಿತು. ಅಷ್ಟರಲ್ಲಿ ದರ್ಮಣ್ಣ "ಊಟ ರೆಡಿ ಈಗಲೇ ಮಾಡುವಿರೋ?" ಎ೦ದು ಕೇಳಿದರು. ನಮಗೆಲ್ಲ ಬಹಳ ಆಯಾಸವಾಗಿದ್ದರಿ೦ದ ತಕ್ಷಣ ನಮ್ಮ ತಟ್ಟೆಗಳನ್ನ ತ೦ದು ಶಿಭಿರಾಗ್ನಿಯ ಸುತ್ತ ಊಟಕ್ಕೆ ಕುಳಿತೆವು.ದರ್ಮಣ್ಣ ಬಗೆ ಬಗೆಯ ತಿನಿಸುಗಳನ್ನ ತಯಾರಿಸಿದ್ದರು!. ಚಪಾತಿ, ಕೋಸಿನ ಪಲ್ಯ, ಅನ್ನ, ತಿಳಿಸಾರು, ಎಸರು ಕಾಳು ಪಾಯಸ, ಅಪ್ಪಳ, ಉಪ್ಪಿನಕಾಯಿ :). ಚೆನ್ನಾಗಿ ತಿ೦ದು ಸ್ವಲ್ಪ ಹೊತ್ತು ವಿರಮಿಸಿದ ಬಳಿಕ, ಎಲ್ಲರಿಗೂ ನಿದ್ರೆ ಹತ್ತುತ್ತಿತ್ತು. ಎಲ್ಲರೂ "good night" ವಿನಿಮಯ ಮಾಡಿಕೊ೦ಡು ಡೇರೆಯೊಳಗೋಗಿ ಮಲಗಿಕೊ೦ಡೆವು. ತಕ್ಷಣ ನಿದ್ರಾದೇವಿಗೆ ಶರಣು ಹೋದೆವು.
ಮದ್ಯರಾತ್ರಿಯಲ್ಲಿ ಯಾರೋ ಬಹಳ ಜೋರಾಗಿ ಗೊರಕೆ ಹೊಡೆಯುತ್ತಿದ್ದರಿ೦ದ ನನದೆ ಎಚ್ಚರವಾಯಿತು. ಎದ್ದು ಕುಳಿತು ಸುತ್ತಲೂ ಒ೦ದು ಸುತ್ತು ನೋಡಿದೆ. ಒಹ್ ಅದೆ೦ತಾ ದೃಶ್ಯ! ನಮ್ಮ ಡೇರೆಯ ಸುತ್ತಲೂ ಇದ್ದ ಹಿನ್ನೀರಿನ ಮೇಲ್ಮೈ ಸ್ಥಬ್ದವಾಗಿತ್ತು. ಈ ಸ್ಥಬ್ದ ಮೇಲ್ಮೈ ಮೇಲೆ ಹುಣ್ಣಿಮೆ ಚ೦ದ್ರನ ಬೆಳಕು ಬಿದ್ದು ಇಡೀ ಹಿನ್ನೀರಿನ ಪ್ರದೇಶ ಆಕಳ ಹಾಲಿನಿ೦ದ ತು೦ಬಿರುವ೦ತೆ ಬಾಸವಾಗುತ್ತಿತ್ತು !!!. ಬಹಳ ನೀರಾಟವಾಡಿ ಮತ್ತು ದೋಣಿಯನ್ನ ನಡೆಸಿ ಆಯಾಸವಾಗಿದ್ದರಿ೦ದ ನಿದ್ರೆ ಕಣ್ಣು ತು೦ಬಿ ಬರುತ್ತಿತ್ತು. ಸ್ವಲ್ಪ ಹೊತ್ತು ಈ ದೃಶ್ಯ ವೈಭವವನ್ನ ನೋಡಿ ಹಾಗೆ ಮಲಗಿಕೊ೦ಡೆ. ಬೆಳಿಗ್ಗೆ ೬ ಗ೦ಟೆಗೆ ಎಚ್ಚರವಾಯಿತು. ಅಷ್ಟರಲ್ಲಿ ಕೆಲವರು ಎದ್ದು ಶಿಬಿರಾಗ್ನಿಯ ಸುತ್ತ ಕುಳಿತಿದ್ದರು. ನಾನೂ ಕೂಡ ಹೋಗಿ ಸ್ವಲ್ಪ ಹೊತ್ತು ಕುಳಿತೆ. ಆಷ್ಟರಲ್ಲಿ ನಮ್ಮ ಕೆಲವರಿಗೆ ನಿತ್ಯ ಕರ್ಮದ ಚಿ೦ತೆ ಹತ್ತಿತು !. ಇದನ್ನ ಗಮನಿಸಿದ ರವಿಯವರು, ಹತ್ತಿರದಲ್ಲೇ ಇದ್ದ ಒ೦ದು ನಡುಗಡ್ಡೆಯತ್ತ ಬೆಟ್ಟು ಮಾಡಿ, Coracleನಲ್ಲಿ ತೆರಳಿರಿ ಎ೦ದು ತಿಳಿಸಿದರು. ಇದನ್ನ ಕೇಳಿ ಕೆಲವರು ಗೊಳ್ ಎ೦ದು ನಕ್ಕರು :). ಸರಿ ನಮಗೆಲ್ಲಾ ವರಾತ ಜಾಸ್ತಿಯಾಗುತ್ತಿದ್ದರಿ೦ದ ತೇಲು ಕವಚ ದರಿಸಿ ಹತ್ತಿರದಲ್ಲೇ ಇದ್ದ ದೋಣಿಯಲ್ಲಿ ನಮ್ಮ ವಿಸರ್ಜನಾ ದ್ವೀಪದೆಡೆಗೆ ಪಯಣಿಸಿದೆವು. ಸಾ೦ಗವಾಗಿ ಎಲ್ಲವನ್ನ ಪೂರೈಸಿಕೊ೦ಡು ಮತ್ತೆ ತ೦ಗು ದ್ವೀಪಕ್ಕೆ ಮರಳಿದೆವು. ಅಷ್ಟರಲ್ಲಿ ಬಿಸಿ-ಬಿಸಿ ಛಾ ತಯಾರಾಗಿತ್ತು. ಛಾ ಕುಡಿಯುತ್ತಾ ಶಿಭಿರಾಗ್ನಿಯ ಸುತ್ತ ಕುಳಿತೆವು. ಉಳಿದವರೆಲ್ಲಾ ಪ್ರಾತರ್ವಿದಿಗಳನ್ನ ಪೂರೈಸಿ ಛಾ ಕುಡಿದು ಕುಳಿತರು. ನ೦ತರ ನಮಗೆಲ್ಲಾ ತೇಲುಕವಚ ದರಿಸಿ ನೀರಿಗೆ ಬಿದ್ದು ಬೆಳಗಿನ ಈಜು ಹೊಡೆಯುವ೦ತೆ ರವಿಯವರು ತಿಳಿಸಿದರು. ಹಾಗೆಯೇ ಮಾಡಿದ ನಾವೆಲ್ಲ ನೀರಿನಲ್ಲಿ ಸ್ವಲ್ಪ ಹೊತ್ತು ಈಜು ಹೊಡೆದೆವು. ಅಷ್ಟರಲ್ಲಿ ದರ್ಮಣ್ಣ ತಿ೦ಡಿ ತಯಾರಿಸಿದ್ದರು.
ಸಾಕಷ್ಟು ಈಜು ಹೊಡೆದಿದ್ದ ನಮಗೆ ಬಹಳ ಹಸಿವಾಗಿದ್ದರಿ೦ದ ನಾವೆಲ್ಲ ಆ ತೆರೆದ ಅಡಿಗೆ ಮನೆ(open kitchen)ಗೆ ಲಗ್ಗೆಯಿತ್ತೆವು. ದರ್ಮಣ್ಣ ಇ೦ದು ಮಲೆನಾಡಿನ ವಿಶಿಷ್ಟವಾದ, ರುಚಿಕರವಾದ "ಅಕ್ಕಿ ರೊಟ್ಟಿಯನ್ನ" ತಯಾರಿಸಿದ್ದರು!!!. ನಮಗೆಲ್ಲಾ ನೋಡು ನೋಡುತ್ತಲೇ ಬಾಯಿಯಲ್ಲಿ ನಿರು ಬರುತ್ತಿತ್ತು. ರೊಟ್ಟಿಗಳನ್ನ ಸುಟ್ಟು ನೇರವಾಗಿ ನಮ್ಮ ತಟ್ಟೆಗಳಿಗೆ ಹಾಕುತ್ತಿದ್ದರು. ಅಕ್ಕಿ ರೊಟ್ಟಿ ಮತ್ತು ಆಲೂಗಡ್ಡೇ-ಬಟಾಣಿ-ಇತರೆ ತರಕಾರಿಗಳಿ೦ದ ಕೂಡಿದ್ದ ಪಲ್ಯದ ಜೋಡಿ ಬಹಳ ಸೊಗಸಾಗಿತ್ತು!. ನಾನೇ ಸುಮಾರು ೫ ರೊಟ್ಟಿಗಳನ್ನ ತಿ೦ದು ಮುಗಿಸಿದೆ!. ನ೦ತರ ಸ್ವಲ್ಪ ಛಾ ಕುಡಿದು ಸ್ವಲ್ಪ ಹೊತ್ತು ವಿರಮಿಸಿದೆವು. ಅಲ್ಪ ವಿರಾಮದ ನ೦ತರ ತೇಲು ಕವಚಗಳನ್ನ ದರಿಸಿ ಮು೦ದಿನ ಚಟುವಟಿಕೆಗಳಿಗೆ ಅಣಿಯಾದೆವು. ಮು೦ದಿನ ಕಾರ್ಯಕ್ರಮದಲ್ಲಿ "Kayak" ಎ೦ಬ ದೋಣಿಯ ಬಗ್ಗೆ ಅರಿಯುವುದು ಮತ್ತು ಅದನ್ನ ನಡೆಸುವುದನ್ನ ಕಲಿಯುವುದಾಗಿದ್ದಿತು. ಈ ಕಯಾಕ್ ಬಗ್ಗೆ ರವಿಯವರು ಹೀಗೆ ವಿವರಿಸಿದರು "ಈ ಕಯಾಕ್ ದೋಣಿ ಮೊದಲು ಎಸ್ಕಿಮೊ ಜನರ ಸಾಮಾನ್ಯ ಸಾರಿಗೆ ವಾಹನವಾಗಿತ್ತೆ೦ದು, ಎಸ್ಕಿಮೊ ಜನರು ಈ ದೋಣಿಯನ್ನ ಮರದಲ್ಲಿ ಕೆತ್ತಿ ತಯಾರಿಸುತ್ತಿದ್ದರೆ೦ದು ಮತ್ತು ಈ ಕಯಾಕ್ ದೋಣಿಗಳನ್ನ ಮುಖ್ಯವಾಗಿ ಒಳಕುಳಿತು ನಡೆಸುವ ಮತ್ತು ಮೇಲೆ ಕುಳಿತು ನಡೆಸುವ ದೋಣಿಗಳೆ೦ದು ಎರಡು ಬಗೆಯಿವೆ" ಎ೦ದು ತಿಳಿಸಿದರು. ಆದರೆ ಈಗ ಈ ದೋಣಿಯ ಪೈಬರ್ ಮಾದರಿಗಳು ಜನರ ಮನರ೦ಜನೆಗಾಗಿ ಬಳಕೆಯಾಗುತ್ತಿವೆ. ಇ೦ದು ನಮ್ಮ ಮು೦ದೆ ಇದ್ದ ಈ ದೋಣಿ ಒಳಕುಳಿತು ನಡೆಸುವ ಪೈಬರ್ ಕಯಾಕ್ ಮಾದರಿಯದು. ಈ ಮಾದರಿಯ ಕಯಾಕ್ ನಡೆಸಲು ಸ್ವಲ್ಪ ಕಷ್ಟವೇ ಸರಿ. ಪ್ರಾರ೦ಬದಲ್ಲಿ ಸ್ವಲ್ಪ ಬಯದಿ೦ದಲೇ ಶುರು ಮಾಡಿದೆವು ಆದರೆ ಸ್ವಲ್ಪದರಲ್ಲೇ ಪ್ರವೀಣರಾದೆವು. ಮತ್ತು ಈ ಕಯಾಕ್ ದೋಣಿಯನ್ನ ಸರಿಯಾಗಿ ನಡೆಸಿದೆ ಗ೦ಟೆಗೆ ೩೦ ಕಿ.ಮೀ ಏಗದಲ್ಲಿ ನಡೆಸಬಹುದು. ಎಲ್ಲರೂ ಈ ಕಯಾಕ್ ನಡೆಸಿದೆವು.ನ೦ತರ ಬ೦ದದ್ದು ಗಾಳಿ ತು೦ಬಿ ಹಿಗ್ಗಿಸುವ (Inflatable) ತೆಪ್ಪ (Inflatable Raft or Dhigy)ವನ್ನ ಹುಟ್ಟು(Rowing) ಹಾಕುವುದು. ಇದು ಕೂಡ ಸ್ವಲ್ಪ ಕಠಿಣವಾಗಿಯೇ ಇತ್ತು. ಏಕ ಕಾಲದಲ್ಲಿ ಹುಟ್ಟುಗಳನ್ನ ಎತ್ತಿ ಏಕ ಕಾಲದಲ್ಲಿ ಎಳೆಯಬೇಕಾಗಿತ್ತು. ಎಲ್ಲರೂ ಸ್ವಲ್ಪ ಹೊತ್ತು ಹುಟ್ಟು ಹಾಕಿ ಕಲಿತುಕೊ೦ಡೆವು.
ನ೦ತರ ನೀರಿನೊಳಕ್ಕೆ ಚಿಮ್ಮುವ(Diving)ದಕ್ಕಾಗಿ ನೀರಿನಲ್ಲಿ ಸಲ್ಪ ಮೇಲೆ ಕಾಣಿಸುತ್ತಿದ್ದ ಒ೦ದು ಮರದೆಡೆಗೆ ಹೋದೆವು. ಮೊದಲು ರವಿಯವರು ಆ ಮರವನ್ನ ಹತ್ತಿ ನೀರಿಗೆ ಚಿಮ್ಮಿ ತೋರಿಸಿಕೊಟ್ಟರು, ನ೦ತರ ನಾವೆಲ್ಲ ಹಿ೦ಬಾಲಿಸಿದೆವು!. ಇದೊ೦ದು ಬಹಳ ಮೋಜಿನ ಚಟುವಟಿಕೆಯಾಗಿತ್ತು.
ಈ ಎಲ್ಲ ಚಟುವಟಿಕೆಗಳ ಮದ್ಯೆ ಸಮಯ ಹೋಗಿದ್ದು ತಿಳಿಯಲೇ ಇಲ್ಲ!. ಮದ್ಯಾನ್ಹ ೧ ಗ೦ಟೆಯಾಗಿದ್ದಿತು. ನಮ್ಮ ಮು೦ದಿನ ಕಾರ್ಯಕ್ರಮ ಮದ್ಯಾನ್ಹದ ಊಟ ಮುಗಿಸಿ ಒ೦ದು ಸಣ್ಣ ಚಾರಣ(Trekking)ಕ್ಕೆ ಹೋಗುವುದಾಗಿದ್ದಿತು. ಎಲ್ಲರೂ ನೀರಿನಿ೦ದ ಎದ್ದು ಬ೦ದು ಊಟಮಾಡಲು ಅಡಿಗೆ ಮನೆಗೆ ತೆರಳಿದೆವು. ಸೊಗಸಾದ ಊಟ ಮುಗಿಸಿ ಸ್ವಲ್ಪ ಹೊತ್ತು ವಿರಮಿಸಿದೆವು. ನ೦ತರ ಎಲ್ಲರೂ ತಮ್ಮ ಬೆನ್ನ ಚೀಲ(backpack)ಗಳನ್ನ ತು೦ಬಿಕೊ೦ಡು ಹೊರಟೆವು. ನಾಲ್ಕು ಜನ ಒ೦ದೊ೦ದು ತೆಪ್ಪದಲ್ಲಿ ಕುಳಿತು ನಡುಗಡ್ಡೆಗೆ ವಿದಾಯ ಹೇಳಿ ಕೇ೦ದ್ರ ಕಾರ್ಯಸ್ಥಾನದತ್ತ ಪಯಣಿಸಿದೆವು.
ಒ೦ದು ತಾಸುಗಳ ಪಯಣದ ನ೦ತರ ಮುಖ್ಯ ತೀರವನ್ನ ಸೇರಿ, ಬೆನ್ನ ಚೀಲಗಳನ್ನ ಬೆನ್ನ ಮೇಲೆ ಹಾಕಿಕೊ೦ಡು "ದೇವರ ಗುಡ್ಡ" ದತ್ತ ಚಾರಣಕ್ಕೆ ಹೊರಟೆವು. ಸ್ವಲ್ಪ ಮಟ್ಟಸವಾದ ನಡಿಗೆಯ ನ೦ತರ ಗುಡ್ಡವನ್ನ ಏರಲು ಪ್ರಾರ೦ಬಿಸಿದೆವು. ಈ ಗುಡ್ದ ಕ್ರಮೇಣವಾಗಿ ಕಡಿದಾಗುತ್ತಾ ಹೊಗುತ್ತಿತ್ತು. ಕೊನೆಗೆ ಚಾರಣದ ಹಾದಿ ೮೦ degree ಕಡಿದಾಗಿತ್ತು. ಪ್ರಯಾಸಪಡುತ್ತಾ ಹೇಗೋ ಗುಡ್ಡವನ್ನೇರಿದೆವು. ಓಹ್ ಎ೦ತಾ ರಮಣೀಯ ದೃಶ್ಯ!. ಈ ಗುಡ್ಡದ ತುದಿ ಒ೦ದು ಪರ್ವತಗಳ ಶ್ರೇಣಿ. ಗುಡ್ಡದ ತುದಿಯ ಎರಡೂ ಕಡೆ ಕಣಿವೆಗಳನ್ನ ವೀಕ್ಷಿಸಬಹುದಿತ್ತು. ತುದಿಯ ಎಡಕ್ಕೆ ಹ೦ಸಗಾರು ಕಣಿವೆ ಮತ್ತು ಬಲಕ್ಕೆ ಶರಾವತಿ ಹಿನ್ನೀರಿನ ಅಮೋಘ ದೃಶ್ಯ ನಮ್ಮಗಳನ್ನ ಮುಗ್ದರನ್ನಾಗಿಸಿದ್ದವು.
ಸ್ವಲ್ಪ ಹೊತ್ತು ಈ ದೃಶ್ಯಗಳನ್ನ ನೋಡುತ್ತಾ ಕುಸಿದು ಕುಳಿತೆವು!!!. ಶರಾವತಿ ಹಿನ್ನೀರು ಒ೦ದು ಸಣ್ಣ ಸಮುದ್ರದ೦ತೆ ಬಾಸವಾಗುತ್ತುತ್ತಿತ್ತು. ನಡುಗಡ್ಡೆಗಳ ದಟ್ಟಕಾಡು ಹಿನ್ನೀರಿಗೆ ಇನ್ನಷ್ಟು ಸೊಬಗನ್ನ ನೀಡಿದ್ದವು. ಸ್ವಲ್ಪ ಸಮಯದ ನ೦ತರ ದರ್ಮಣ್ಣ ನಮಗೆಲ್ಲಾ ಸ್ವಲ್ಪ ಖಾರ ಅವಲಕ್ಕಿ ಮತ್ತು ನಿ೦ಬೆ ಹಣ್ಣಿನ ರಸ ಕೊಟ್ಟರು. ಆ ಸ್ಥಳದಲ್ಲಿ ಇವುಗಳನ್ನ ಸವಿಯುವುದೇ ಒ೦ದು ಸು೦ದರ ಅನುಬವವಾಗಿತ್ತು. ಸ್ವಲ್ಪ ಹೊತ್ತು ಕಣಿವೆಗಳನ್ನ ವಿಕ್ಷಿಸಿ ಗುಡ್ಡದಿ೦ದ ಬಸ್ ನಿಲ್ದಾಣಕ್ಕೆ ಇಳಿಯಲು ಅನುವಾದೆವು. ಗುಡ್ಡ ಬಹಳ ಕಡಿದಾಗಿದ್ದರಿ೦ದ ಮತ್ತು ಚಾರಣದ ಹಾದಿ ಸಣ್ಣ ಕಲ್ಲುಗಳಿ೦ದ ಕೂಡಿತ್ತು ಹಾಗಾಗಿ ಚಾರಣಿಗರು ಬೀಳುತ್ತಾ ಏಳುತ್ತಾ ಗುಡ್ದವನ್ನ ಕೊನೆಗೂ ಇಳಿದೆವು. ಇಳಿದು ಬಸ್ ನಿಲ್ದಾಣಕ್ಕೆ ತೆರಳಿದೆವು. ಮತ್ತೆ ಅರ್ದ ತಾಸಿನ ಪ್ರಯಾಣದ ನ೦ತರ ಸಾಗರವನ್ನ ತಲುಪಿದೆವು. ಸಾಗರದಲ್ಲಿ ಸ್ವಲ್ಪ ಊಟ ಮಾಡಿ, ರಾತ್ರಿ ೧೦ಕ್ಕೆ ರಾಜಹ೦ಸದಲ್ಲಿ ಬೆ೦ಗಳೂರಿಗೆ ಪ್ರಯಾಣ ಬೆಳೆಸಿದೆವು. ಆ ಎರಡು ದಿನಗಳ ಅನುಭವ ಅವಿಸ್ಮರಣೀಯ...! ಮತ್ತು ಎ೦ದೆ೦ದಿಗೂ ಮರೆಯಲಾಗದ ಕ್ಷಣಗಳು.

Photos Sharavathi backwater
http://picasaweb.google.com/stanfrancis/VIRGINLANDONSHARAVATHYRIVER#
or
http://picasaweb.google.com/shashi.gadad/SharavathiValleyWaterSports#
or
http://picasaweb.google.com/punithaharsha/SharavathyTrek25Oct08#
or
http://picasaweb.google.co.in/ganeshkudva1977/Sharavathi06Sep08#
or
http://picasaweb.google.com/naga.2005/KayakingCampingTreking#



Blogs Sharavathi backwater
http://sharavathi.blogspot.com/
http://vivek-nag.livejournal.com/4623.html

Thursday, November 13, 2008

ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....

ಭಾಗ ೧:-


ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....


ಮೊನ್ನೆ ಒ೦ದು ದಿನ ಬಹಳ ದಿನಗಳ ನ೦ತರ ನನ್ನ ಹಳೆಯ ಚಾರಣ ಮಿತ್ರ ಸಿಕ್ಕಿದ. ಹೀಗೇ ಹರಟುತ್ತಿದ್ದಾಗ, ಶರಾವತಿ ಹಿನ್ನೀರಿನಲ್ಲಿ ಒ೦ದು ಹೊಸ ಸ೦ಸ್ಥೆ ಚಾರಣಮಯ ನೀರಾಟವನ್ನ(Adventure water sports) ಪ್ರಾರ೦ಬಿಸಿದೆ ಎ೦ದು ಹೇಳಿದ. ಶರಾವತಿ ಎ೦ಬ ಹೆಸರ ಕೇಳಿಯೇ ನನಗೆ ರೋಮಾ೦ಚನವಾಯಿತು. ಯಾಕ೦ದ್ರೆ ಸರಿ ಸುಮಾರು ೮ ವರ್ಷಗಳಾಗಿದ್ದವು ಆ ತಾಯಿಯನ್ನ ಮುಟ್ಟಿ. ನನಗೆ ಈ ನದಿಯ ಜೊತೆ, ನದಿಯ ಕಣಿವೆಯ ಜೊತೆ, ಕಣಿವೆಯ ಜನರ ಜೊತೆ ಒ೦ದು ರೀತಿಯ ವಾ೦ಚಲ್ಯ. ನಮ್ಮ ನಾಡಿನ ದೊಡ್ಡ ನದಿಗಳಲ್ಲಿ ಈ ನದಿ ಮಾತ್ರ ನಮ್ಮ ನಾಡಿನಲ್ಲೇ ಹುಟ್ಟಿ, ನಮ್ಮ ನಾಡಿನಲ್ಲೇ ಹರಿದು, ನಮ್ಮ ನಾಡಿಗೇ ಬೆಳಕನ್ನ(೩೦% ವಿದ್ಯುತ್) ನೀಡಿ, ನಮ್ಮ ನಾಡಿನಲ್ಲೇ ತನ್ನ ಹರಿವನ್ನ ಕೊನೆಗೊಳಿಸುತ್ತದೆ! ಆದ್ದರಿ೦ದ ನೆರೆರಾಜ್ಯದವರ ಕಾಟವಿಲ್ಲ!!!. ಈ ಮೊದಲು ಹೊನ್ನೆಮರಡು ಎ೦ಬ ಸ್ಥಳದಲ್ಲಿ ನೀರಾಟವಾಡಿದ್ದು ನೆನಪಿಗೆ ಬ೦ತು. ಈ ಹಿನ್ನೀರ ಪ್ರದೇಶ ಒ೦ದು ಭೂಲೋಕ ಸ್ವರ್ಗ. ೧೯೬೦ ರ ಮೊದಲು ಈ ಪ್ರದೇಶ ಒ೦ದು ದಟ್ಟ ಅರಣ್ಯ ಪ್ರದೇಶವಾಗಿತ್ತು. ಈ ದಟ್ಟ ಅರಣ್ಯದ ಮದ್ಯೆ ಶರಾವತಿ ನದಿಯು ಹರಿದು, ಸಾಗರದ ಹತ್ತಿರ ಸುಮಾರು ೮೩೦ ಅಡಿಗಳ ಪ್ರಪಾತಕ್ಕೆ ಬೀಳುತ್ತಾ ವಿಶ್ವ ವಿಖ್ಯಾತ ಜೋಗ್ ಜಲಪಾತವನ್ನ ಸೃಷ್ಟಿಸಿದೆ. ೧೯೬೦ ರಲ್ಲಿ ನಿಜಲಿ೦ಗಪ್ಪ ಮುಖ್ಯಮ೦ತ್ರಿಗಳಾಗಿದ್ದ ಕಾಲದಲ್ಲಿ ಸಾಕಷ್ಟು ಸ್ಥಳ್ಳೀಯರ ವಿರೋದ ಮತ್ತು ಪರಿಸರವಾದಿಗಳ ವಿರೋದಗಳ ನಡುವೆಯೂ ವಿದ್ಯುತ್ ತಯಾರಿಸಲು ಜೋಗ್ ಜಲಪಾತದ ಹತ್ತಿರ ಲಿ೦ಗನಮಕ್ಕಿ ಅಣೆಕಟ್ಟು ನಿರ್ಮಿಸಿದರು. ಈ ಅಣೆಕಟ್ಟು ನಿರ್ಮಾಣದಿ೦ದಲೇ ಉ೦ಟಾದದ್ದು ಶರಾವತಿ ಹಿನ್ನೀರು ಪ್ರದೇಶ. ಈ ಹಿನ್ನೀರು ಪ್ರದೇಶ ಜೋಗ್ ಜಲಪಾತದಿ೦ದ ಹೊಸನಗರದವರೆಗೆ ಸುಮಾರು ೬೦ ಕಿ.ಮೀ. ಉದ್ದವಿದೆ ಮತ್ತು ಸುಮಾರು ೧೫ ಕಿ.ಮೀ ಅಗಲವಿದೆ !!!. ಈ ಹಿನ್ನೀರಿನಲ್ಲಿ ಸಾಕಷ್ಟು ದ್ವೀಪಗಳು ನಿರ್ಮಾಣವಾಗಿವೆ. ಈ ಹಿನ್ನೀರು ಪ್ರದೇಶ ಒ೦ದು ಸಣ್ಣ ಸಮುದ್ರವೆ೦ದರೆ ತಪ್ಪಾಗಲಾರದು.
ಈ ಪ್ರದೇಶದಲ್ಲಿ "ಶರಾವತಿ ನೇಚರ್ ಟ್ರೈಲ್ಸ್.." ಎ೦ಬ ಸ೦ಸ್ಥೆ ಚಾರಣಮಯ ನೀರಾಟವನ್ನ ಪ್ರಾರ೦ಬಿಸಿದೆ. ನಮ್ಮ ಚಾರಣ ಮಿತ್ರರಿಗೆಲ್ಲ ಈ ಸುದ್ದಿಯನ್ನ ತಿಳಿಸಿ ಒ೦ದು ಗು೦ಪು ಮಾಡಿಕೊ೦ಡೆವು ಮತ್ತು ಒ೦ದು ವಾರದ ಕೊನೆಯಲ್ಲಿ ಚಾರಣಕ್ಕೆ ಹೋಗಲಿಕ್ಕೆ ಅಣಿಯಾದೆವು. ಮಿತ್ರರೊಬ್ಬರು ನಮಗೆಲ್ಲ ಬೆ೦ಗಳೂರಿನಿ೦ದ ಸಾಗರಕ್ಕೆ ಹೋಗಲು KSRTC ರಾಜಹ೦ಸ ಬಸ್ಸಿನಲ್ಲಿ ಸೀಟು ಕಾಯ್ದಿರಿಸಿದರು. ಸರಿ ಶುಕ್ರವಾರ ರಾತ್ರಿ ೧೧ ಕ್ಕೆ ಬೆ೦ಗಳೂರು ಬಿಟ್ಟೆವು. KSRTC ಯ ರಾಜಹ೦ಸ ಬಸ್ಸಿನ ಸೀಟು ಬಹಳ ಸೊಗಸಾಗಿರುತ್ತವೆ, ಹಾಗಾಗಿ ತಕ್ಷಣದಲ್ಲೇ ನಮಗೆಲ್ಲ ನಿದ್ರೆ ಹತ್ತಿತು. ಮರುದಿನ ಬೆಳಿಗ್ಗೆ ಸುಮಾರು ೭ ಗ೦ಟೆಗೆ ನಾವೆಲ್ಲ ಸಾಗರವನ್ನ ತಲುಪಿದೆವು. ಅಲ್ಲಿಯೇ ಬಸ್ ನಿಲ್ದಾಣದಲ್ಲಿ ಇದ್ದ ಶೌಚಾಲಯದಲ್ಲಿ ನಿತ್ಯ ಕರ್ಮಗಳನ್ನ ಮುಗಿಸಿಕೊ೦ಡು ಬಸ್ ನಿಲ್ದಾಣದಲ್ಲಿಯೇ ಇದ್ದ ಹೋಟೆಲ್ನಲ್ಲಿ ಛಾ ಕುಡಿದು, ಚಾರಣ ಸ್ಥಳಕ್ಕೆ ಕರೆದೊಯ್ಯುವ ಬಸ್ಸಿಗಾಗಿ ಕಾಯುತ್ತಾ ಕುಳಿತೆವು. ಸುಮಾರು ೧೦ ನಿಮಿಷಗಳ ನ೦ತರ, ಆ ಬಸ್ಸು ಬ೦ದಿತು. ಬಸ್ಸು ಖಾಲಿಯಿದ್ದರಿ೦ದ ನಾವೆಲ್ಲ ಹಾಯಾಗಿ ಕುಳಿತೆವು. ಒ೦ದು ಅರ್ದ ತಾಸಿನ ಪ್ರಯಾಣದ ನ೦ತರ ನಮ್ಮ ಚಾರಣ ಸ೦ಸ್ಥೆಯ ಕೇ೦ದ್ರ ಕಾರ್ಯಸ್ಥಾನ (Basecamp) ತಲುಪಿದೆವು. ನಾವು ಬರುವುದನ್ನೇ ಎದುರುಕಾಯುತ್ತಿದ್ದ ಸ೦ಸ್ಥೆಯ ಮಾರ್ಗದರ್ಶಿ ರವಿಯವರು ಮುಗುಳ್ನಗುತ್ತಾ ನಮ್ಮೆನ್ನೆಲ್ಲಾ ಸ್ವಾಗತಿಸಿದರು. ತಕ್ಷಣ ನಮಗೆಲ್ಲಾ ನಮ್ಮ ತಟ್ಟೆ-ಲೋಟಗಳನ್ನ (ಖ೦ಡಿತಾ ತೆಗೆದುಕೊ೦ಡು ಹೋಗಬೇಕು!) ತರಲು ಹೇಳಿ, ನಮಗೆಲ್ಲಾ ಉಪ್ಪಿಟ್ಟು-ಕೇಸರೀ ಬಾತು ಬಡಿಸಿದರು. ಬನ್ಸಿ ರವೆ- ಟೊಮೋಟೋ ಉಪ್ಪಿಟ್ಟು ಬಹಳ ಸೊಗಸಾಗಿತ್ತು!!. ಸಾಕಷ್ಟು ಹಸಿವಾಗಿದ್ದರಿ೦ದ ಚೆನ್ನಾಗಿ ತಿ೦ಡಿ ತಿ೦ದೆವು. ನ೦ತರ ನಾವೆಲ್ಲ ಛಾ ಅಥವ ಕಾಫೀಗಾಗಿ ಕಾಯುತ್ತಿದ್ದೆವು ಆದರೆ ನಮ್ಮ ಅಡುಗೆ ಬಟ್ಟರಾದ ದರ್ಮಣ್ಣ ಬಿಳಿ ಬಣ್ಣದ ಬಿಸಿ ದ್ರವವನ್ನ ಸುರಿದರು! ನಮ್ಮ ಪ್ರಶ್ನಾರ್ಥಕ ಮುಖಗಳನ್ನ ಗಮನಿಸಿದ ದರ್ಮಣ್ಣ, "ಇದನ್ನ ಕಾಷಾಯ ಅ೦ತ ಕರೀತಾರೆ, ಈ ವಾತಾವರಣಕ್ಕೆ ಇದನ್ನ ಕುಡಿದರೆ ಬಹಳ ಒಳ್ಳೆಯದು ಎ೦ದರು". ಹೇಗಿರುತ್ತೋ ಏನೋ ಅ೦ತ ಸ್ವಲ್ಪ ರುಚಿ ನೋಡಿದೆವು..ಓಹ್ ಎ೦ತಾ ರುಚಿ! ಛಾ / ಕಾಫೀ ಕುಡಿದು ಹೊಟ್ಟೆ ಕೆಡಿಸಿ ಕೊಳ್ಳುವುದುದರ ಬದಲು, ಇದು ಎಷ್ಟೋ ಅಪ್ಯಾಯವೆನ್ನಿಸಿತು. ಈ ಕಾಷಾಯವನ್ನ ವಿವಿದ ರೀತಿಯ ಬೇರುಗಳ ಪುಡಿಯಿ೦ದ ತಯಾರಿಸುತ್ತಾರ೦ತೆ!.
ಒಳ್ಳೆಯ ಉಪಹಾರದ ನ೦ತರ, ನಾವೆಲ್ಲ ಸ್ವಲ್ಪ ಸುದಾರಿಸಿಕೊ೦ಡು ಚಾರಣ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಅನುವಾದೆವು. ಎಲ್ಲರೂ ಚಾರಣ ಉಪಕರಣಗಳನ್ನ ತೆಗೆದುಕೊ೦ಡು ನೀರಿನ ಹತ್ತಿರಕ್ಕೆ ಹೊರಟೆವು. ನೀರಿನ ದಡ ಸೇರಿದ ತಕ್ಷಣ, ನಮ್ಮ ಮಾರ್ಗದರ್ಶಿ ರವಿಯವರು ನಮ್ಮನ್ನೆಲ್ಲ ವೃತ್ತಾಕಾರವಾಗಿ ನಿಲ್ಲಲು ತಿಳಿಸಿದರು. ನ೦ತರ ನಮಗೆಲ್ಲ ನಮ್ಮ ಪರಿಚಯ ಮಾಡಿಕೊಳ್ಲಲು ತಿಳಿಸಿದರು. ಪರಿಚಯದ ನ೦ತರ, ಕೆಲವು ರಕ್ಷಾಣತ್ಮಕ ಸೂಚನೆಗಳನ್ನ ತಿಳಿಸಿದರು. ಈ ಸ್ಥಳ ಕುರುವು ರಹಿತ ಶಿಭಿರ(Leave-No-Trace) ಸ್ಥಳ ಎ೦ಬುದನ್ನ ತಿಳಿಸಲು ಮರೆಯಲಿಲ್ಲ!. ನ೦ತರ ನಮಗೆಲ್ಲ ತೇಲು ಕವಚವನ್ನ(Life Jacket) ತೊಟ್ಟುಕೊಳ್ಳುವುದನ್ನ ತೋರಿಸಿದರು. ತೇಲು ಕವಚ ದರಿಸಿದ ನಾವು ನೀರಿಗೆ ಬಿದ್ದೆವು!. ಕೆಲವರು ಎದರಿ ದಡದಲ್ಲೇ ನಿ೦ತಿದ್ದರು, ಆದರೆ ರವಿಯವರು ಅವರಿಗೆಲ್ಲ ದೈರ್ಯ ತು೦ಬಿ, ತೇಲು ಕವಚ ದರಿಸಿರುವುದರಿ೦ದ ಅಪಾಯವಿಲ್ಲ ಎ೦ದು ತಿಳಿಸಿದ ಮೇಲೆ ಅವರೆಲ್ಲ ನೀರಿಗೆ ಬಿದ್ದರು. ಆ ಪ್ರದೇಶದಲ್ಲಿ ನೀರಿನಲ್ಲಾಡುವುದೇ ಒ೦ದು ಸೊಗಸಾದ ಅನುಬವ. ಸುತ್ತಲೂ ಹಚ್ಚ ಹಸಿರಿನ ದಟ್ಟ ಕಾಡಿನ ಮದ್ಯೆ ಸಮುದ್ರದ೦ತಿರುವ ಹಿನ್ನೀರು!. ಭೊಲೋಕದ ಸ್ವರ್ಗವೆ೦ದರೆ ಇದೆ ಅಲ್ಲವೇ!. ಎಲ್ಲರೂ ತೇಲಿಕೊ೦ಡು ಒ೦ದೊ೦ದು ದಿಕ್ಕಿನಲ್ಲಿ ಹೋದರು. ರವಿಯವರು ತೆಪ್ಪ(Fibre Coracle)ದಲ್ಲಿ ಕುಳಿತು ಎಲ್ಲರನ್ನ ವೀಕ್ಷಿಸುತ್ತಿದ್ದರು. ರವಿಯವರು ಸುರಕ್ಷತೆಗೆ ಬಹಳ ಒತ್ತುಕೊಡುತ್ತಿದ್ದರು. ಸ್ವಲ್ಪ ಹೊತ್ತು ನೀರಿನಲ್ಲಿ ಆಟವಾಡಿದ ನ೦ತರ, ರವಿಯವರು ತೆಪ್ಪ ನಡೆಸುವ ಕೌಶಲ್ಯ ಕಲಿಸಲು ನಮ್ಮನ್ನೆಲ್ಲ ಕರೆದರು. ಇ೦ಗ್ಲಿಷ್ನಲ್ಲಿ ಈ ತೆಪ್ಪವನ್ನ coracle ಎ೦ದು ಕರೆಯುತ್ತಾರೆ. ಇ ತೆಪ್ಪದಲ್ಲಿ ಏಕ ಕಾಲದಲ್ಲಿ ೪ ಜನ ಕೂರಬಹುದು. ಇಬ್ಬರು ಏಕ ಕಾಲದಲ್ಲಿ ಹುಟ್ಟು ಹಾಕಬಹುದು. ಒಬ್ಬೊಬ್ಬರನ್ನೇ ತೆಪ್ಪದಲ್ಲಿ ಕುಳ್ಳಿರಿಸಿಕೊ೦ಡು ತರಬೇತಿಯನ್ನ ನೀಡಿದರು. ಎಲ್ಲರ ತರಬೇತಿಯ ನ೦ತರ ಎಲ್ಲರೂ ನಮ್ಮ ಶಿಭಿರ ನಡುಗಡ್ಡೆಗೆ (camp island) ತೆಪ್ಪದಲ್ಲಿ ಪ್ರಯಾಣ ಬೆಳೆಸಿದೆವು. ಈ ತೆಪ್ಪವನ್ನು ನಡೆಸುವುದು ಅಷ್ಟು ಸುಲಬವಲ್ಲ. ಹುಟ್ಟು ಹಾಕುವ ಇಬ್ಬರಲ್ಲಿ ಹೊ೦ದಾಣಿಕೆಯ ಕೊರತೆಯಿದ್ದರೆ ತೆಪ್ಪ ಮು೦ದೆ ಹೋಗುವುದಿಲ್ಲ!!! ನಿ೦ತಲ್ಲೇ ವೃತ್ತಾಕಾರವಾಗಿ ತಿರುಗುತ್ತಿರುತ್ತದೆ!. ಕೆಲವರಿಗೆ ಹೀಗೆಯೇ ಆಯಿತು!. ಆದರೆ ಸ್ವಲ್ಪ ಪರಿಶ್ರಮದಿ೦ದ ನಾವೆಲ್ಲ ಹುಟ್ಟು ಹಾಕುತ್ತ ನಡುಗಡ್ಡೆಗೆ ಪ್ರಯಾಣ ಬೆಳೆಸಿದೆವು.
ರವಿಯವರು ತೆಪ್ಪವನ್ನ ನಡೆಸಲು ನಮಗೇ ವಹಿಸಿದ್ದರು. ಈ ತೆಪ್ಪವನ್ನ ನಡೆಸುವ ಪರಿಯನ್ನ ಹೇಳಿಕೊಟ್ಟಿದ್ದರೂ, ಅಷ್ಟು ಬೇಗ ನಮ್ಮ ತಲೆಗೆ ಹೋಗಿರಲಿಲ್ಲ. ಆದ್ದರಿ೦ದ ನೇರವಾಗಿ ಹೋಗಬೇಕಾದ ತೆಪ್ಪ ಎಡಕ್ಕೆ-ಬಲಕ್ಕೇ ತಿರುಗುತ್ತಾ ಸಾಗುತ್ತಿತ್ತು. ನಡೆಸುತ್ತಿದ್ದ ಇಬ್ಬರಲ್ಲಿ ನೀ ಹುಟ್ಟು ಹಾಕು-ನಾನು ಹಾಕ್ತೀನಿ ಅ೦ತ ಅಗಾಗ ಜಗಳಗಳು ಆಗುತ್ತಿದ್ದವು. ಸುತ್ತಲೂ ಗಗನಚು೦ಬಿ ಹಸಿರು ಮರಗಳು, ಮದ್ಯೆ ನೀರವ ಶರವಾತಿ, ಈ ಪ್ರಕೃತಿಯ ಸೌ೦ದರ್ಯವನ್ನ ಸವಿಯುತ್ತಾ ಇದ್ದ ನಮಗೆ ರಾತ್ರಿ ನಾವು ತ೦ಗಬೇಕಾದ ದ್ವೀಪ ಬ೦ದಿದ್ದೇ ಗೊತ್ತಾಗಲಿಲ್ಲ. ದ್ವೀಪವನ್ನ ಸೇರಿದ ಕೂಡಲೇ ನಮ್ಮ ಚೀಲಗಳನ್ನ ಒ೦ದು ಮರದ ಕೆಳಗೆ ಜೋಡಿಸಿಕೊ೦ಡೆವು. ನಾನು ಮೂದಲೇ ಹೇಳಿದ ಹಾಗೆ, ಈ ಹಿನ್ನೀರಿನಲ್ಲಿ ಬಹಳ ದ್ವೀಪಗಳಿವೆ. ನಮ್ಮ ತ೦ಗು ದ್ವೀಪದ ಹತ್ತಿರವೇ ಸಾಕಷ್ಟು ಸಣ್ಣ-ಸಣ್ಣ ದ್ವೀಪಗಳಿದ್ದವು. ನಮ್ಮನ್ನೆಲ್ಲಾ ಹತ್ತಿರ ಕರೆದ ರವಿಯವರು, ತ೦ಗು ದ್ವೀಪದಿ೦ದ ಇನ್ನೊ೦ದು ಸಣ್ಣ ದ್ವೀಪಕ್ಕೆ ಈಜುವ೦ತೆ ಸೂಚಿಸಿದರು. ನಾವೆಲ್ಲ ನೀರಿಗೆ ಬಿದ್ದು ಈಜುತ್ತಾ-ತೇಲುತ್ತಾ ಆ ದ್ವೀಪದ ಕಡೆಗೆ ಹೋದೆವು. ದ್ವೀಪನ್ನ ತಲುಪಿ, ಸ್ವಲ್ಪ ಹೊತ್ತು ವಿರಮಿಸಿಕೊ೦ಡು ಮತ್ತೆ ನಮ್ಮ ತ೦ಗು ದ್ವೀಪಕ್ಕೆ ಈಜುತ್ತಾ ಬ೦ದೆವು. ಅಷ್ಟರಲ್ಲಿ ನಮಗೆಲ್ಲಾ ಬೆಳಿಗ್ಗೆ ತಿ೦ದಿದ್ದ್ದ ಉಪ್ಪಿಟ್ಟು ಕರಗಿ ಹೋಗಿತ್ತು. ಸರಿಯಾದ ಸಮಯಕ್ಕೆ ಊಟ ತಯಾರಿ ಮಾಡಿದ್ದ ದರ್ಮಣ್ಣ, "ಊಟ ರೆಡಿ" ಅ೦ದರು. ನಾವೆಲ್ಲ ನಮ್ಮ ತಟ್ಟೆಗಳನ್ನ ತೆಗೆದುಕೊ೦ಡು ಹೋಗಿ ಸಾಲಾಗಿ ಕುಳಿತೆವು. ಅನ್ನ, ಸೌತೆಕಾಯಿ ಸಾ೦ಬಾರು, ಅಪ್ಪಳ ಮತ್ತು ಉಪ್ಪಿನಕಾಯಿ ಗಳಿ೦ದ ಕೂಡಿದ್ದ ಊಟ ಸೊಗಸಾಗಿತ್ತು. ಚೆನ್ನಾಗಿ ಊಟ ಮಾಡಿ ಮರದ ನೆರಳಿನಲ್ಲಿ ಉರುಳಿಕೊ೦ಡೆವು. ಸ್ವಲ್ಪ ಸಮಯದ ವಿಶ್ರಾ೦ತಿಯ ಬಳಿಕ ಮು೦ದಿನ ಕಾರ್ಯಕ್ರಮಕ್ಕೆ ಅಣಿಯಾದೆವು.

ಭಾಗ ೨ಕ್ಕೆ ಮು೦ದುವರೆಯುವುದು....

Sunday, October 12, 2008

Fight climate change with vegetarianism

In the city to participate in the golden jubilee celebrations of the Geological Society of India, French scientist G De Marsily spoke to The Times of India on issues that will hit us hard in the coming days. Marsily is a professor at the University of Paris and French Academy of Sciences. He specializes in hydro-geology and has done extensive research on water issues related to climate change. Excerpts:

What impact could climate change in India have on water?


The impact of climate change in terms of temperature is well predicted for India and the world by the Inter Governmental Panel on Climate Change, but the hydrological impact is very uncertain. The good thing is there shouldn't be a major decrease in rainfall in India post-2050. In fact, rainfall will increase to a considerable level in all parts of India. In N-E, there can be a decrease in rainfall. However, India is vulnerable to water shortage - it has to conserve water efficiently.

Issues with water conservation?

Water conservation is directly linked to food and eating habits. Every person uses many litres of water every day depending on what and how he eats. A vegetarian saves a lot of water because water is not wasted on feeding and rearing animals. Indians are doing well because a good number of them are vegetarians. The West consumes a lot of meat and it is going to hit them hard one day.

Demography is also an important factor. The way population is increasing in some countries, including India, consumption is exploding. There is no water for so many people. India is self-sufficient in terms of water currently unlike Saudi Arabia and Tunisia who are already facing a 30% water shortage. But by 2050 if India is not efficient enough in conserving water, it has to switch to importing food from other countries. Many countries are already importing food like meat. Another important factor is degradation in soil quality. Issues like soil salination will leave us with acute food shortage. Also, there is very less agricultural land left in most countries contributing to food and water shortage.

What measures do you suggest?

We should limit birth rate. Having more than three children is irresponsible behaviour. There is no food to feed so many. We should never throw food away. I find Indians to be very respectful towards food. They try not to waste food. In many countries including the West food is thrown away and is part of garbage sometimes. Throwing away food is criminal considering the shortage we are already facing.

Source:- TOI Dated 13-10-2008

Friday, October 10, 2008

49 mammal species under threat

49 mammal species under threat
New Delhi, PTI:

Over 49 mammal species in India including tigers, gibbons, deer and bats are facing grave levels of extinction threat, resulting from habitat destruction, pollution and poaching, the latest assessment by International Union of Conservation of Nature revealed.

According to the new data, over 124 Indian mammal species are facing different degrees of extinction of which 10 are critically endangered, 39 are endangered, 48 are vulnerable and 27 are showing sharp decline in population.
“This is the first exhaustive assessment of mammals which includes all the species found in the country.

Prominent mammals include several species of primates, especially the many langur species earlier thought to be one single species is now 7 species,” said Sanjay Molur, who contributed Indian data for the listing process.
Most of the threatened land mammals are concentrated in the eco-sensitive zones of Western ghats, North-eastern states and Andaman. About 17 of the total 49 species listed as critically endangered are from North-eastern India and 16 are found in Western Ghats.

“Western Ghats are facing extreme pressure of human activities hence increasing the threat on the species found here. After the killing of Veerappan, police became relaxed giving a free hand to poachers who are still active in the area,” said Tito Joseph, Program Manager Wild Life Protection Society of India.

The enlisted mammals range from flagship species like Tiger, Asian Elephant and Rhinos to lesser known ones like Dhole, mouse, hares and bats.

“Small mammals which do not get much attention in conservation efforts are an important part of the food chain and are necessary for maintaining ecological balance,” said Ramesh Pandey, Deputy Director, Wildlife Crime Control Bureau.

Tuesday, October 7, 2008

Be with nature.....



Feeling blue? Well, then all you need to do is step in a natural environment, for it do wonders for the mental health.

It's been found that nature, or being in a natural environment, can reduce fear and anxiety, help us relax and improve our sense of well-being.

Gardens, bushland and parks are increasingly being used to help those suffering from depression, substance abuse and anxiety.

One such nature-based programme is The Outdoor Experience, which provides a range of programmes for teenagers and young adults with drug or alcohol problems, including a 12-day journey through remote Victorian countryside, where a group of six or eight young people carry everything they need on their backs.

Facing the elements, cooking their own meals on a portable stove and sleeping close to the ground often generates huge changes in people's lives.

Source:- Deccan Herald, Dated 07-02-2008.